ರಾಯರ ಪವಾಡ…!
ನಂಬಿನಡೆದ ಲಕ್ಷಾಂತರ ಜನರ ಜೀವನದಲ್ಲಿ ಅದ್ಭುತಗಳನ್ನ ಸೃಷ್ಟಿಸಿದಂತಹ , ಅಚ್ಚರಿಗಳನ್ನ ಎದುರಾಗಿಸುತ್ತಿರುವಂತಹ ತಾಣ ಈ ತಿರುಪತಿ ತಿಮ್ಮಪ್ಪನ ತಾಣ.
ತಿರುಪತಿ ತಿಮ್ಮಪ್ಪನ ವಿಗ್ರಹದಲ್ಲಿನ ಅದ್ಭುತವಾದ ಶಕ್ತಿಯಿಂದ ಮೂಖರಿಗೆ ಮಾತು ಬಂದಂತಹ , ಕಡುಬಡವರು ಕೋಟ್ಯಾದಿಪತಿಗಳಾದಂತಹ, ಸಮಸ್ಯೆಗಳು ಪರಿಹಾರವಾಗಿ ಇಚ್ಚೆಗಳು ಈಡೇರಿದಂತಹ ಲಕ್ಷಾಂತರ ಉದಾಹರಣೇಗಳು , ಜೀವಂತ ಸಾಕ್ಷಿಗಳು ನಮಗಿಲ್ಲಿ ಸಿಗುತ್ತವೆ.
ತಿಮ್ಮಪ್ಪನ ತಾಣಕ್ಕೆ ಅಂದು ಆ ಒಂದು ತಂಡವು ಬಂತು – ಹಿಡಿದಿರುವ ಕೆಲಸವು ಯಶಸ್ವಿಯಾಗುವಂತೆ ಮಾಡಿರೆಂದು ತಿಮ್ಮಪ್ಪನಲ್ಲಿ ಭಕ್ತಿಯಿಂದ ಬೇಡಿ ಹೋಯಿತು – ತಿಮ್ಮಪ್ಪನ ತಾಣದಲ್ಲಿ ಇಟ್ಟಂತಹ ಆ ಬೇಡಿಕೆ ಈಡೇರಿಬಿಟ್ಟಿತು, ಇಡೀ ಜಗತ್ತೇ ಮೆಚ್ಚುವಂತಹ ಅಚ್ಚರಿಯು ನಡೆಯಿತು – ಹಾಗೆ ನಡೆದ ಅಚ್ಚರಿಯೇ ಚಂದ್ರಯಾನ ಮೂರು ಯಶಸ್ವಿಯಾಗಿದ್ದು .
ರಾಕೆಟ್ ಲಾಂಚ್ ಗೂ ಮುಂಚೆ ತಿರುಪತಿಗೆ ಹೋಗಿ ಬಂದಿದ್ದ ಇಡೀ ತಂಡ ತಿರುಪತಿ ತಿಮ್ಮಪ್ಪನಿಗೆ ಧನ್ಯವಾದಗಳನ್ನ ಹೇಳಿತು .
ಇನ್ನು ತಿಮ್ಮಪ್ಪನ ಕೃಪೆಯಿಂದ ಹುಟ್ಟಿದ , ತಿಮ್ಮಪ್ಪನ ಕೃಪಾಕಟಾಕ್ಷವನ್ನ ಪಡೆದಿರುವಂತಹ ಆ ಯತಿಗಳಿಂದ ಊಹೆಗೂ ಮೀರಿದ ಅಚ್ಚರಿಗಳು ಎದುರಾಗುತ್ತಿವೆ – ಅಂತಹ ಅಚ್ಚರಿಗಳನ್ನ ಎದಿರಾಗಿಸುತ್ತಿರುವ ಯತಿಗಳಾದ್ರೂ ಯಾರೂ ಅಂದ್ರೆ ಬೃಂಧಾನದಲ್ಲಿ ಕುಳಿತಿರುವ ಶ್ರೀ ರಾಘವೇಂದ್ರ ಸ್ವಾಮಿಗಳು
ನನ್ನ ದೇಹಕ್ಕೆ ವಯಸ್ಸಾಗುತ್ತಿದೆ, ಇಂತಹ ದೇಹವನ್ನ ಹೊತ್ತು ನಾನು ನೊಂದವರ ಸೇವೆಯನ್ನ ಮಾಡಲು ಸಾಧ್ಯವಾಗುತ್ತಿಲ್ಲಾ, ಬೃಂದಾವನದಲ್ಲಿ ಕುಳಿತು ದೀನದಲಿತರ ಸೇವೆಗೆ ನಿಲ್ಲುವೆ , ನೊಂದವರ ಸೇವೆಗೆ ನಿಲ್ಲುವೆ ಅಂತ ಹೇಳಿ ಜಗದ್ಪಾಲಕನ ಅಪ್ಪಣೆ ಪಡೆದು ರಾಘವೇಂದ್ರ ಸ್ವಾಮಿಗಳು ಬೃಂಧಾನಸ್ಥರಾಗುತ್ತಾರೆ.
ಬೃಂಧಾವನಸ್ಥರಾದ ಕೆಲವೇ ಗಂಟೆಗಳಲ್ಲಿ ಒಂದು ಅಚ್ಚರಿ ಎದುರಾಗುತ್ತೆ- ಆ ಅಚ್ಚರಿಯೇ ರಾಯರ ಶಿಷ್ಯರಾದ ಅಪ್ಪಾಣ್ಣಾಚಾರ್ಯರು ತುಂಗಭದ್ರಾ ನದಿಯ ಮತ್ತೊಂದು ಬದಿಯಲ್ಲಿರುವ ಎಲೆಬಿಚ್ಚಾಲಿ ಗ್ರಾಮದಿಂದ ತಡವಾಗಿ ಬಂದದ್ದು
ಇನ್ನು ಅಪ್ಪಣ್ಣಾಚಾರ್ಯರು ಬರುವ ವೇಳೆಗೆ ಬೃಂದಾವನದೊಳಕ್ಕೆ ಮೃತ್ತಿಕೆಯನ್ನು ಹಾಕಿ ಮುಚ್ಚಿಬಿಡಲಾಗಿತ್ತು , ಅಪ್ಫಣ್ಣಾಚಾರ್ಯರು ರೋಧಿಸಲು ನಿಂತಾಗ ಒಂದು ಅಚ್ಚರಿ ಎದುರಾಯಿತು , ಆ ಅಚ್ಚರಿಯೇ ರಾಯರು ಬೃಂದಾವನದೊಳಗಿಂದ ಮಾತನಾಡಿದ್ದು , ನಾನು ಎಲ್ಲೂ ಹೋಗಿಲ್ಲಾ ಅಂತ ಹೇಳಿದ್ದು .
ಇನ್ನು ರಾಯರು ಬೃಂದಾವನದೊಳಕ್ಕೆ ಹೋಗಿ ಅಲ್ಲಿಗಾಗಲೇ 130 ವರ್ಷಗಳು ಕಳೆದಿದ್ದವು- ಇನ್ನು ಆಗ ಇದ್ದ ಬ್ರಿಟೀಶ್ ಸರಕಾರ ಒಂದು ನಿರ್ದಾರವನ್ನ ಮಾಡುತ್ತೆ, ಆ ನಿರ್ಧಾರವೇ ಮಂತ್ರಾಲಯದಲ್ಲಿ ಒಳ್ಳೆಯ ಅಧಾಯ ಬರುತ್ತಿದೆ , ಆ ಕಾರಣ ಅದನ್ನ ತಮ್ಮ ಸುಬರ್ದಿಗೆ ತೆಗೆದುಕೊಳ್ಳುವುದು.
ಅದು ಸಾವಿರದ ಎಂಟನೂರನೇ ಇಸವಿ , ಆಗ ಬಳ್ಳಾರಿ ಡೆಪ್ಯೂಟಿ ಕಲೆಕ್ಟರ್ ಆಗಿದ್ದ ಥಾಮಸ್ ಮನ್ರೋ ಕಂದಾಯ ಅಧಿಕಾರಿಗಳೊಂದಿಗೆ ಮಂತ್ರಾಲಯಕ್ಕೆ ಬರುತ್ತಾರೆ.
ಮಂತ್ರಾಲಯಕ್ಕೆ ಬಂದ ಬ್ರಿಟಿಶ್ ಅಧಿಕಾರಿ ಥಾಮಸ್ ಮನ್ರೋ ಅಲ್ಲಿನ ಆಧಾಯದ ಬಗ್ಗೆ ಕೆಲವರನ್ನ ವಿಚಾರಿಸಲು ನಿಲುತ್ತಾನೆ , ಮಂತ್ರಾಲಯವನ್ನ ಜಪ್ತೀ ಮಾಡುವ ಮಾತುಗಳನ್ನಾಡುತ್ತಾರೆ – ಇನ್ನು ಈ ಸಮಯದಲ್ಲಿ ಕೆಲವರು ಇಲ್ಲಿ ಯಲ್ಲವನ್ನೂ ರಾಯರೇ ನಿರ್ಧರಿಸುತ್ತಾರೆಂದು ಹೇಳುತ್ತಾರೆ , ಅವರ ಪವಾಡಗಳ ಬಗ್ಗೆ ಮಾತನಾಡುತ್ತಾರೆ – ಅಂಥಹವುಗಳನ್ನ ನಂಬದ ಥಾಮಸ್ ಮನ್ರೋ ಆ ಸಮಾಧಿ ಎಲ್ಲೆಂದು ಕೇಳುತ್ತಾನೆ -ರಾಯರ ಬೃಂಧಾನವದ ಬಳಿಗೆ ಹೋಗುತ್ತಾರೆ , ಬೃಂದಾವನದ ಮುಂದೆ ನಿಲ್ಲುತ್ತಾರೆ
ರಾಯರ ಬೃಂದಾವನದ ಮುಂದೆ ನಿಂತ ಬ್ರಿಟೀಶ್ ಅಧಿಕಾರಿ ಥಾಮಸ್ ಮನ್ರೋ ಗೆ ಒಂದು ಚಕಿತ ಎದುರಾಗುತ್ತೆ – ಆ ಚಕಿತವೇ ರಾಯರ ಭೃಂಧಾವನ ಇಬ್ಬಾಗವಾಗಿದ್ದು , ರಾಯರು ಕಾಣಿಸಿಕೊಂಡಿದ್ದು, ಮಾತನಾಡಲು ಆರಂಭಿಸಿದ್ದು, ಮಂತ್ರಾಕ್ಷತೆಯನ್ನ ಕೊಟ್ಟಿದ್ದು .
ಬೇರೆ ಯಾರಿಗೂ ರಾಯರು ಕಾಣಿಸಿಕೊಳ್ಳಲಿಲ್ಲಾ – ಇನ್ನು ಮನ್ರೋ ಜೊತೆ ಬಂದಂತಹ ಅಧಿಕಾರಿಗಳು ಥಾಮಸ್ ರನ್ನೇ ನೋಡುತ್ತಿದ್ದಾರೆ -ಅಧಿಕಾರಿ ಮನ್ರೋ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ , ಒಬ್ಬೊಬರೆ ಮಾತನಾಡುತ್ತಿದ್ದಾರೆ – ಥಾಮಸ್ ಮನ್ರೋ ಏಕಾ ಏಕಿ ಬೃಂದಾವನದ ಮುಂದೆ ಕೈಮುಗಿದು ಕೂತುಬಿಟ್ಟರು
ನಾಲ್ಕೈದು ನಿಮಿಷಗಳ ನಂತರ ಥಾಮಸ್ ಮನ್ರೋ ಒಬ್ಬೊಬ್ಬರೆ ಮಾತನಾಡುವುದನ್ನ ನಿಲ್ಲಿಸಿದ ನಂತರ ಮತ್ತೊಂದು ಚಕಿತ ಎದುರಾಯಿತು – ಹಾಗೆ ಎದುರಾದ ಚಕಿತವೇ ಥಾಮಸ್ ಮನ್ರೋ ಕೈಯಲ್ಲಿ ಮಂತ್ರಾಕ್ಷತೆ ಇದ್ದದ್ದು.
ಆ ಮೂರ್ನಾಲ್ಕು ನಿಮಿಷಗಳ ಕಾಲ ಬೃಂದಾವನದೊಳಗೆ ರಾಯರನ್ನ ನೋಡಿದಂತಹ , ಅವರೊಂದಿಗೆ ಮಾತನಾಡಿದಂತಹ ,ಅವರು ಮಂತ್ರಾಕ್ಷತೆಯನ್ನ ಕೊಟ್ಟಂತಹ ಚಕಿತವು ಥಾಮಸ್ ಮನ್ರೋ ರವರನ್ನ ಶರಣಾಗುವಂತೆ ಮಾಡಿಬಿಟ್ಟಿತು , ಹೀ ಈಸ್ ಗ್ರೇಟ್ , ಗ್ರೇಟ್ , ಗ್ರೇಟ್ ಅಂತ ಹೇಳಲು ನಿಂತ ಥಾಮಸ್ ಮನ್ರೋ ಗೆಜಿಟಿಯೇರ್ ನಲ್ಲಿ ತಮಗಾದಂತಹ ಅನುಭವನ್ನ ನಮೂದಿಸಿಬಿಟ್ಟರು – ಮಂತ್ರಾಲಯವು ಮಹಾಗುರುವಿನ ತಾಣವಾಗಿದೆ – ಯಾರೂ ಕೂಡಾ ಅದಕ್ಕೆ ಅಡ್ಡಿ ಉಂಟುಮಾಡಬಾರದೆಂದು ದಾಖಲಿಸಿಬಿಟ್ಟರು.
ರಾಯರನ್ನ ನಂಬಿನಡೆಯಲು ನಿಂತ ಥಾಮಸ್ ಮನ್ರೋಗೆ ಒಂದು ಚಕಿತ ಎದುರಾಯಿತು – ಹಾಗೆ ಎದುರಾದ ಚಕಿತವೇ ಮದ್ರಾಸ್ ಪ್ರೆಸಿಡೆನ್ಸಿಯೂ ಥಾಮಸ್ ಮನ್ರೋರವರಿಗೆ ಸರ್ ಎಂಬ ಬಿರುದುಕೊಟ್ಟಿದ್ದು , ಆ ನಂತರ ಅವ ರು ಸರ್ ಥಾಮಸ್ ಮನ್ರೋ ಆಗಿದ್ದು.
ಬ್ರಿಟೀಶ್ ಅಧಿಕಾರಿ ಸರ್ ಥಾಮಸ್ ಮನ್ರೋ ಬೃಂದಾವನದಿಂದ ತಮಗಾದಂತಹ ಅನುಭವವನ್ನ ಇಂಗ್ಲೇಂಡ್ ನಲ್ಲಿದ್ದ ತಮ್ಮ ಮಗಳಿಗೆ ತಿಳಿಸಿದರು , ರಾಯರು ಕೊಟ್ಟಿರುವಂತಹ ಅಕ್ಷತೆಯನ್ನ ನಾನು ನಿನಗಾಗಿ ಎತ್ತಿಟ್ಟಿರುವೆ ಅಂತ ಹೇಳಿದರು ಆ ನಂತರ ಅವರ ಇಡೀ ಕುಟುಂಬ ರಾಯರ ಭಕ್ತರಾಗಿ ಹೋದರು , ತಲೆತಲೆಮಾರುಗಳಿಂದ ಅವರ ವಂಶವು ಮಂತ್ರಾಲಯಕ್ಕೆ ಬರುತ್ತಿರುವುದು , ರಾಯರಿಗೆ ನೆಡೆದುಕೊಳ್ಳುತ್ತಿರುವುದು , 2018 ರರಲ್ಲೂ ಸಹಾ ಮನ್ರೋ ವಶಸ್ಥರು ಮಂತ್ರಾಲಯಕ್ಕೆ ಬಂದು ಬೃಂಧಾವನವನ್ನ ದರುಶನ ಮಾಡಿದೆ,ಪೂಜೆಯನ್ನ ಸಲ್ಲಿಸಿದೆ
ಐದಾರು ತಲೆಮಾರುಗಳಿಂದ ರಾಯರನ್ನ ಆರಾಧಿಸುತ್ತಿರುವ ಇಂಗ್ಲೆಂಡ್ ವಾಸಿಗಳಾದ ಮನ್ರೋವಂಶಸ್ತರ ಪ್ರಕಾರ ರಾಯರಿಂದ ನಮ್ಮ ಜೀವನದಲ್ಲಿ ಬಹಳಷ್ಟು ಅಚ್ಚರಿಗಳು ಎದುರಾಗಿವೆ , ಎದುರಾಗುತ್ತಿವೆ ಎಂಬುವುದು -ಅವರು ನಮ್ಮನ್ನ ಉದ್ದರಿಸುತ್ತಿರುವ ಗುರು ಎಂಬುವುದು.