ಅಯೋಧ್ಯೆಯಲ್ಲಿ ಹನುಮ ದರ್ಶನ…!

ಕೋಟ್ಯಾನು ಕೋಟಿ ಭಕ್ತರ ಆರಾಧ್ಯ ಧೈವನಾಗಿರುವ ಶ್ರೀರಾಮರ ಅಯೋಧ್ಯೆಯು ನಾನಾ ಕುತೂಹಲಕಾರಿ ಸಂಗತಿಗಳನ್ನ ತನ್ನಲ್ಲಿ ಹುದುಗಿಸಿಕೊಂಡಿದೆ .

ರಾವಣನನ್ನ ಸಂಹರಿಸಿದ ನಂತರ ಶ್ರೀರಾಮ ಲಕ್ಷ್ಮಣರು ಸೀತಾಮಾತೆ ಸಮೇತ ಅಯೋದ್ಯೆಗೆ ಬರುತ್ತಾರೆ – ಆ ನಂತರ ಸೀತಾಮಾತೆ ಮತ್ತೆ ಕಾಡಿಗೆ ಹೋಗುವಂತಹ ಸ್ಥಿತಿ ಎದುರಾಗುತ್ತೆ – ಅಲ್ಲಿ ಲವಕುಶರಿಗೆ ಜನ್ಮ ನೀಡುತ್ತಾರೆ.

ಶ್ರೀರಾಮರು ತಮ್ಮ ತಂದೆ ಅಂತ ತಿಳಿಯದೆ ಲವ-ಕುಶರು ತಂದೆಯ ವಿರುದ್ದ ಯುದ್ಧಕ್ಕೆ ನಿಲ್ಲುತ್ತಾರೆ

ಈ ಸಮಯದಲ್ಲಿ ಲವ-ಕುಶರು ತಮ್ಮ ಮಕ್ಕಳೆನ್ನುವುದು ಶ್ರೀರಾಮನಿಗೆ ತಿಳಿಯುತ್ತೆ – ಇದೇ ಸಮಯದಲ್ಲಿ ಸೀತಾಮಾತೆಯ ಅವತಾರ ಅಂತ್ಯವಾಗುತ್ತೆ.

ಮಕ್ಕಳೊಂದಿಗೆ ಅಯೋಧ್ಯೆಗೆ ಆಗಮಿಸಿದ ಶ್ರೀರಾಮರು ಲವ-ಕುಶರಿಗೆ ಪಟ್ಟಾಭಿಷೇಕ ಮಾಡುತ್ತಾರೆ . ಆ ನಂತರ ರಾಮರ ಅವತಾರವೂ ಅಂತ್ಯವಾಗುತ್ತೆ. ಕುಶನಿಂದ ರಾಮನಿಗೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತೆ.

ಯುಗಯುಗಗಳು ಕಳೆದ ನಂತರ ಅಯೋಧ್ಯೆಯಲ್ಲಿ ಒಂದು ಅಚ್ಚರಿ ಎದುರಾಗುತ್ತೆ. ಅಂತಹ ಅಚ್ಚರಿ ಎದುರಾಗಿದ್ದಾದ್ರೂ ಯಾರಿಂದ ಅನ್ನೋ ಪ್ರಶ್ನೆಗಳಿಗೆ ಉತ್ತರಾ ಶ್ರೀರಾಮರ ಆದೇಶದಂತೆ ಅಯೋಧ್ಯೆಯಲ್ಲಿ ನೆಲೆಯಾಗಿರುವ ವೀರ ಹನುಮರಿಂದ.

ಹನುಮರ ಸ್ವಾಮಿನಿಷ್ಟೆಗೆ ಮೆಚ್ಚಿದ ಶ್ರೀರಾಮರು ಅಯೋಧ್ಯೆಗೆ ನನ್ನ ದರ್ಶನಕ್ಕೆ ಬರುವ ಬಕ್ತರೆಲ್ಲರೂ ಮೊದಲು ನಿನ್ನ ದರ್ಶನ ಮಾಡುವಂತಾಗಲೆಂದು ಅನುಗ್ರಹಿಸುತ್ತಾರೆ – ತನ್ನ ಪ್ರಭುವಿನಿಂದ ಅಂತಹ ಅನುಗ್ರಹವನ್ನ ಪಡೆದ ಹನುಮರು ಇಲ್ಲಿ ಸದಾ ನೆಲೆನಿಂತು ಹರಿಸುತ್ತಿದ್ದಾರೆಂಬ ಮಾತಿಗೆ ಪೂರಕವಾಗಿ ಅಂತಹ ಅಚ್ಚರಿಗಳು ನಡೆಯುತ್ತಿರುವಂತಹ ಬಹಳಷ್ಟು ಉದಾಹರಣೆಗಳು , ಸಾಕ್ಷಿಗಳು ನಮಗಿಲ್ಲಿ ಸಿಗುತ್ತವೆ .

ಅಯೋಧ್ಯೆಯಲ್ಲಿನ ಹನುಮರ ಮಂದಿರದಲ್ಲಿರುವ ಹನುಮ ವಿಗ್ರಹವು ಹಲವು ದಶಕಗಳ ಹಿಂದೆ ಒಂದು ಮರದ ಕೆಳಗಿತ್ತು , ಓರ್ವ ಅವಧೂತರು ಮರದ ಕೆಳಗೆ ಏಕಾಏಕಿ ಕಾಣಿಸಿಕೊಂಡರು – ಹಾಗೆ ಕಾಣಿಸಿಕೊಂಡ ಹನುಮರ ಶಕ್ತಿ ಉಳ್ಳಂತಹ ಅವಧೂತರಾದ್ರೂ ಯಾರೂ ಅಂದ್ರೆ ಬಾಬಾ ಅಭಯ್ ರಾಮ್ ದಾಸ್

ಇನ್ನು ಅಂದು ಅಯೋಧ್ಯೆ ಪ್ರಾಂತ್ಯವನ್ನ ಆಳ್ವಿಕೆ ನೆಡೆಸುತ್ತಿದ್ದ ಓರ್ವ ನವಾಭರ ಮಗನಿಗೆ ಒಂದು ಮಾರಣಾಂತಿಕ ಖಾಯಿಲೆ ಆವರಿಸುತ್ತೆ – ಇನ್ನೇನು ಸಾಯುವ ಸ್ಥಿತಿಯಲ್ಲಿದ್ದ ನಾವಾಭರ ಮಗನನ್ನ ಓರ್ವರು ನೀಡಿದಂತಹ ಸಲಹೆಯಂತೆ ಅಭಯ್ ರಾಮ್ ದಾಸ್ ಬಾಬಾರ ಬಳಿಗೆ ಎತ್ತಿಕೊಂಡು ಬಂದರು -ಬಾಬಾರು ಭಕ್ತಿಯಿಂದ ರಾಮರನ್ನ ನೆನೆದು ನೀರನ್ನ ನವಾಬರ ಮಗನ ಮೇಲೆ ಪ್ರೋಕ್ಷಿಸಿದ ನಂತರ ಒಂದು ಅಚ್ಚರಿ ಎದುರಾಯಿತು – ಆ ಅಚ್ಚರಿಯೇ ಆತ ಬದುಕುಳಿದಿದ್ದು , ಆ ನಂತರ ಆತ ಮರದ ಕೆಳಗೆ ಇದ್ದ ಹನುಮರ ಶಕ್ತಿಶಾಲಿ ವಿಗ್ರಹಕ್ಕೆ ಮಂದಿರ ಕಟ್ಟಿಸಿಕೊಟ್ಟಿದ್ದು

ರಾಮಭಕ್ತ ಹನುಮರು ತಮ್ಮ ಇರುವಿಕೆಯನ್ನ ನಾನಾ ರೀತಿಯಲ್ಲಿ ಪ್ರಕಟಿಸಿದಂತಹ , ಸ್ವತಹ ಹನುಮರೇ ಕಾಣಿಸಿಕೊಂಡಂತಹ ವಿಸ್ಮಯಕಾರಿ ಅನುಭವಗಳು ಇಲ್ಲಿ ಆದಂತಹ , ಆಗುತ್ತಿರುವಂತಹ ಬಹಳಷ್ಟು ಉದಾಹರಣೇಗಳು ನಮಗಿಲ್ಲಿ ಸಿಗುತ್ತವೆ – ಈ ಮಂದಿರದಲ್ಲಿ ಪ್ರತಿದಿನ ಒಂದು ಪೀಠವನ್ನ ಹೂಗಳಿಂದ ಅಲಂಕರಿಸಿ ಹನುಮರಿಗೆಂದು ಇರಿಸಲಾಗುತ್ತೆ -ಇನ್ನು ಬೆಳಗಾಗುವಷ್ಟರಲ್ಲಿ ಒಂದು ಅಚ್ಚರಿ ಎದುರಾಗಿರುತ್ತೆ – ಆ ಅಚ್ಚರಿಯೇ ಪೀಠದ ಮೇಲಿನ ಬಟ್ಟೆಯು ಸರಿದಿರುವುದು , ಹೂಗಳು ಸರಿದಿರುವುದು .

ಇನ್ನು ಇಲ್ಲಿ ಬಾಂಬ್ ಬ್ಲಾಸ್ಟ್ ನಂತಹ ಆಘಾತವನ್ನ ಕೋತಿಯೊಂದು ಬಂದು ತಡೆದಂತಹ ಉದಾಹರಣೆಯು ನಮಗೆ ಸಿಗುತ್ತೆ, ಅಷ್ಟೆ ಅಲ್ಲದೆ ನಾನಾ ಆಘಾತಗಳನ್ನ ಕೋತಿಗಳು ತಡೆದಂತಹ ನಿದರ್ಶನಗಳು ನಮಗೆ ಸಿಗುತ್ತವೆ – ಇಲ್ಲಿನ ಅಂತಹ ಅಚ್ಚರಿಗಳು ಸಾಕ್ಷಾತ್ ಹನುಮರಿಂದಲೇ ನಡೆಯುತ್ತಿವೆ ಎಂಬ ಮಾತು ಇಲ್ಲಿನ ಜನರದ್ದು.

Leave a Reply

Your email address will not be published. Required fields are marked *